Thursday, 6 September 2018

ಅಧ್ಯಾಯ - 04 : ಶ್ಲೋಕ – 05

ಭಗವಾನುವಾಚ ।ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ॥೫॥

ಭಗವಾನ್ ಉವಾಚ-ಭಗವಂತ ಹೇಳಿದನು.
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ |
ತಾನಿ ಅಹಮ್  ವೇದ ಸರ್ವಾಣಿ ನ ತ್ವಮ್  ವೇತ್ಥ ಪರಂತಪ-

ಓ ಅರ್ಜುನ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಓ ಅರಿಗಳನ್ನು ತರಿದವನೆ, ಅವನ್ನೆಲ್ಲ ನಾನು ಬಲ್ಲೆ- ಆದರೆ ನಿನಗೆ ಗೊತ್ತಿಲ್ಲ.

ಜನ್ಮ ಅಂದರೆ ಜನನ ಅಥವಾ ಹುಟ್ಟುವುದು. ಇಲ್ಲದೇ ಇರುವುದು ಹುಟ್ಟುವುದಿಲ್ಲ. ಜಡವನ್ನು ಹುಟ್ಟಿತು ಎಂದು ನಾವುಕರೆಯುವುದಿಲ್ಲ.  ಸೂಕ್ಷ್ಮ ಶರೀರದಿಂದ ಸ್ಥೂಲ ಶರೀರದಲ್ಲಿ ಕಾಣಿಸಿಕೊಳ್ಳುವುದು ಜನನ. ಸಾಯುವುದು ಅಂದರೆಸೂಕ್ಷ್ಮಶರೀರ ಸ್ಥೂಲಶರೀರವನ್ನು ತೈಜಿಸುವುದು. ಇಲ್ಲಿ ಕೃಷ್ಣ ಹೇಳುತ್ತಾನೆ: "ನನಗೆ ಹಾಗು ನಿನಗೆ ಅನೇಕ ಹುಟ್ಟುಗಳು ಆಗಿಹೋದವು. ನನಗೆ ಅದು ತಿಳಿದಿದೆ ಆದರೆ ಪರಂತಪನಾದ ನಿನಗೂ ಈ ವಿಚಾರ ತಿಳಿದಿಲ್ಲ" ಎಂದು. 

ಕೃಪೆ:  ಪದ್ಮಶ್ರೀ  🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯರು🙏

श्रीभगवानुवाच बहूनि मे व्यतीतानि जन्मानि तव चार्जुन।
तान्यहं वेद सर्वाणि न त्वं वेत्थ परन्तप॥

श्री भगवान बोले- हे परंतप अर्जुन! मेरे और तेरे बहुत से जन्म हो चुके हैं। उन सबको तू नहीं जानता, किन्तु मैं जानता हूँ
॥5॥

Sri Bhagavaan Uvaacha:
Bahooni me vyateetaani janmaani tava chaarjuna;
Taanyaham veda sarvaani na twam vettha parantapa.

The Blessed Lord said:
Many births of Mine have passed, as well as of thine, O Arjuna! I know them all but thouknowest not, O Parantapa!

1 comment:

  1. ಭಾರತೀಯ ಅವಿದ್ಯಾ ಅಜ್ಞಾನಿ ಅಂಧತೆ ಮಕ್ಕಳೇ, ಈ ಭಗವದ್ಗೀತೆ ಉಪನಿಷತ್ ವೇದಗಳಲೀ ಮಾತ್ರವೇ ಅಲ್ಲ ಈ ಜಗತ್ತಿನಲೀ ಯಾವುದೇ ಧರ್ಮದ ದೇವರಿಂದಲಿ ಪವಿತ್ರಗ್ರಂಥಗಳಿಂದಲೂ ಎನೇ ಒಂದೇ ಒಂದು 1/100 ಲಾಭವಿಲ್ಲವೇ.....ಯಾರಿಗೂ ಶಾಂತಿ ನೆಮ್ಮದಿ ಸಿಕ್ಕಿಲ್ಲ ಸಿಗುವುದೇ ಇಲ್ಲ. ಇದು ಮಹಾನ್ ಮುಠ್ಠಾಳ ಮೂರ್ಖ ಮೂಢ ಮರುಳ ಮಡೆಯರೇ ಹೀಗೆ ಹೇಳಿದ್ದಾರೆ ಎಂಬುದನ್ನು ಮರೆಯಬಾರದು ಮರೆಯಲು ಸಾಧ್ಯವೇ ಇಲ್ಲ

    ReplyDelete