ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು?
ಈ ಪ್ರಶ್ನೆಯನ್ನು ನಮಗೆ ನಮ್ಮ ಮಕ್ಕಳು ಕೇಳಿರಬಹುದು ಅಥವಾ ನಾವು ನಮ್ಮ ಅಜ್ಜಂದಿರಿಗೆ ಕೇಳಿರಬಹುದು! ಉತ್ತರ ಸಿಕ್ಕಿರಲೂಬಹುದು. ಆದರೆ ಒಬ್ಬ ಅಜ್ಜ ಕೊಟ್ಟ ಉತ್ತರ ಕುತೂಹಲಕಾರಿಯಾಗಿದೆ. ಆ ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ.
ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ ‘ಅಜ್ಜ ಭಗವದ್ಗೀತೆ ಪುಸ್ತಕವನ್ನು ನಾನು ಓದಲು ಪ್ರಯತ್ನಿಸಿದೆ. ಆದರೆ ನನಗೆ ಏನೂ ಅರ್ಥವಾಗಲಿಲ್ಲ. ಅರ್ಥವಾದ ಅಲ್ಪಸ್ವಲ್ಪ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ’ ಎಂದ. ಅಜ್ಜ ‘ ಅರ್ಥವಾದರೂ, ಅರ್ಥವಾಗದಿದ್ದರೂ, ನೆನಪಿನಲ್ಲುಳಿದರೂ, ನೆನಪಿನಲ್ಲುಳಿಯದಿದ್ದರೂ ಓದಲೇಬೇಕಾದ ಗ್ರಂಥಗಳು ಇವು’ ಎಂದರು. ಮೊಮ್ಮಗ ‘ ಅರ್ಥವಾಗದ ನೆನಪಿನಲ್ಲಿ ಉಳಿಯದ ಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ? ಎಂದ. ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ ‘ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ.
ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ, ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿಕೊಂಡು ಬಾ’ ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ. ಇದ್ದಿಲು ಹಾಕಿಟ್ಟಿದ್ದರಿಂದ ಜೋಳಿಗೆ ಕಪ್ಪು ಕಪ್ಪಾಗಿತ್ತು. ಆತ ಅದನ್ನು ತೆಗೆದುಕೊಂಡು ನದಿಗೆ ಹೋದ. ಜೋಳಿಗೆಯನ್ನು ನೀರಿನಲ್ಲಿ ಅದ್ದಿ ನೀರು ತುಂಬಿಸಿಕೊಂಡ. ಮನೆ ಕಡೆ ಧಾವಿಸಿದ. ಜೋಳಿಗೆ ಬಟ್ಟೆಯದಾದ್ದರಿಂದ ಮನೆಗೆ ಬರುವಷ್ಟರಲ್ಲಿ ನೀರೆಲ್ಲಾ ಸೋರಿ ಹೋಗಿತ್ತು. ಮೊಮ್ಮಗ ಅಜ್ಜನಿಗೆ ‘ಜೋಳಿಗೆಯಲ್ಲಿ ನೀರು ತರುವುದು ಕಷ್ಟ. ಇಲ್ಲಿಗೆ ಬರುವಷ್ಟರಲ್ಲಿ ಎಲ್ಲ ಸೋರಿಹೋಗುತ್ತದೆ. ಬಿಂದಿಗೆಯಲ್ಲಿ ನೀರು ತರಲೆ? ಎಂದು ಕೇಳಿ.
ಅಜ್ಜ ‘ ನನಗೆ ಬಿಂದಿಗೆಯ ನೀರು ಬೇಡ. ಜೋಳಿಗೆಯ ನೀರೇ ಬೇಕು’ ಎಂದರು. ಮೊಮ್ಮಗ ಮತ್ತೊಮ್ಮೆ ನದಿಗೆ ಧಾವಿಸಿ, ಜೋಳಿಗೆಯಲ್ಲಿ ನೀರು ತುಂಬಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಮತ್ತೆ ನೀರೆಲ್ಲ ಸೋರಿಹೋಗಿತ್ತು. ಅಜ್ಜ ‘ ಮತ್ತೆ ಹೋಗು. ಜೋಳಿಗೆಯಲ್ಲೇ ನೀರು ತೆಗೆದುಕೊಂಡು ಬಾ’ ಎಂದರು. ಮೊಮ್ಮಗ ಮತ್ತೆ ನದಿಗೆ ಓಡಿದ. ಅಪರೂಪದ ಮೊಮ್ಮಗ, ಅಜ್ಜನ ಮಾತನ್ನು ಚಾಚೂ ತಪ್ಪದೇ, ಪ್ರತಿಭಟಿಸದೇ ಪಾಲಿಸುತ್ತಿದ್ದ. ಹೀಗೆ ಹತ್ತು ಸಾರಿ ನಡೆಯಿತು. ಆದರೆ ಜೋಳಿಗೆಯಲ್ಲಿ ನೀರು ತರಲಾಗ ಲಿಲ್ಲ. ಮೊಮ್ಮಗ ‘ ಅಜ್ಜಾ! ನಾನು ಹತ್ತಲ್ಲ, ನೂರು ಸಾರಿ ಪ್ರಯತ್ನಿಸಿದರೂ ಜೋಳಿಗೆಯಲ್ಲಿ ನೀರು ತರಲಾಗುವುದಿಲ್ಲ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸೋರಿ ಹೋಗುತ್ತದೆ.’ ಎಂದ.
‘ಮಗೂ, ನೀರು ಸೋರಿ ಹೋಗುತ್ತದೆಂಬುದು ನಿಜ. ಚಿಂತೆಯಿಲ್ಲ. ಆದರೆ ಜೋಳಿಗೆ ಈಗ ಹೇಗಾಗಿದೆ ನೋಡು!’ ಎಂದರು. ಮೊದಲನೆಯ ಸಾರಿ ನದಿಗೆ ಹೋದಾಗ ಜೋಳಿಗೆ ಇದ್ದಿಲಿನ ಕಪ್ಪು ಬಣ್ಣದಲ್ಲಿತ್ತು. ಈಗ ಹತ್ತು ಸಾರಿ ನದಿಗೆ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಕಪ್ಪು ಜೋಳಿಗೆ ಬಿಳಿಯ ಜೋಳಿಗೆಯಾಗಿತ್ತು! ಅಂದರೆ ಕೊಳೆಯನ್ನೆಲ್ಲ ಕಳೆದುಕೊಂಡು ಶುಭ್ರವಾಗಿತ್ತು! ಆಗ ಅಜ್ಜಾ ‘ ಭಗವದ್ಗೀತೆಯನ್ನು ಓದಿದಾಗ ಅರ್ಥವಾಗದಿರಬಹುದು, ಓದಿದ್ದು ನೆನಪಿನಲ್ಲಿ ಉಳಿಯದಿರಬಹುದು, ಆದರೆ ಓದುವಾತನ ಬುದ್ಧಿ ಶುದ್ಧಿಯಾಗುತ್ತದೆ. ಅದಕ್ಕಾಗಿ ಭಗವದ್ಗೀತೆಯನ್ನು ಓದಬೇಕು’ ಎಂದರಂತೆ. ಧರ್ಮಗ್ರಂಥಗಳನ್ನು ಏಕೆ ಓದಬೇಕೆಂಬ ಪ್ರಶ್ನೆಯನ್ನು ನಮ್ಮ ಮಕ್ಕಳು ನಮಗೆ ಕೇಳಿದರೆ, ನಾವು ಉತ್ತರ ಕೊಡಲು ಈ ಪ್ರಸಂಗ ಸಹಕಾರಿಯಾಗಬಹುದು.ಮಾನ್ಯರೇ ಭಗವದ್ಗೀತೆಯನ್ನು ಪ್ರೀತಿಯಿಂದ ಓದಿ, ಮನನ ಮಾಡಿ ಆಗ ದುಃಖದಿಂದ ಪಾರಾಗುವಿರಿ. ನಮ್ಮೇಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯೇ ಪರಿಹಾರ. ಇದು ಒಂದು ಜನಾಂಗದಲ್ಲ. ಇಡೀ ಮಾನವ ಕುಲಕ್ಕೆ ಸೇರಿದ್ದು. ಅನೇಕ ಮಹಾತ್ಮರು ಗೀತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖ, ಶಾಂತಿ, ಸಮಾಧಾನವನ್ನು ಪಡೆದಿದ್ದಾರೆ. ಸಹ್ರದಯರೇ ಮಾನವನದು ದೇಹವಲ್ಲ ಅದು ಆತ್ಮ. ನಾವು ಅನುಭವಿಸುವ ಎಲ್ಲಾ ದುಃಖ ದೇಹಕ್ಕೆ ಸಂಭಂದಿಸಿದು, ಆತ್ಮದಲ್ಲೇ ಮನಸನ್ನು ಸ್ಥಿರಗೊಳಿದರೆ ಎಲ್ಲಾ ದುಃಖದಿಂದ ಪಾರಾಗಬಹುದು.ಗೀತೆಯನ್ನು ಸರಿಯಾಗಿ ಮನನ ಮಾಡಿಕೊಂಡಲ್ಲಿ, ಯಶಸ್ಸು, ಕೀರ್ತಿ ಮತ್ತು ಸಂಪತ್ತನ್ನು ಪಡೆಯಬಹುದು. ಇಳಿ ವಯಸ್ಸಿನಲ್ಲಿ ವೈರಾಗ್ಯವನ್ನು ತಾಳಬಹುದು ನೀವು ಏಕಾಂಗಿಯೆಂದು ತಿಳಿಯಬೇಡಿರಿ. ನಿಮ್ಮ ಶ್ರೇಯಸ್ಸನ್ನು ಬಯಸುವ ಸಜ್ಜನರು ಬಹಳಷ್ಟಿದ್ದಾರೆ. ನಮ್ಮ ವೇದಿಕೆಯ ಈ ಪ್ರಯತ್ನವೇ ಅದರ ಪ್ರತೀಕ. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಬೇಕಿದೆ. ಮಾಧ್ಯಮಗಳಲ್ಲಿ ಬರುವ ಕೆಟ್ಟ ವಿಚಾರಗಳ, ಅತ್ಯಾಚಾರಗಳ ಬಗ್ಗೆ ಓದುವುದನ್ನು ಬಿಟ್ಟು ದಿನದ ಪ್ರಾರಂಭ ಭಗವದ್ಗೀತೆಯ ಅಧ್ಯಯನದಲ್ಲಿ ಆರಂಭವಾಗಲಿ. ಇದು ನಮ್ಮ ಮೆದುಳಿಗೆ ಸ್ಪೂರ್ತಿಯ ಆಹಾರ. ನಾವೇಲ್ಲರು ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಉಪಯೋಗಿಸುವ ಪ್ರಯತ್ನ ಮಾಡೋಣ. ನಮ್ಮೇಲ್ಲರ ಬಾಳು ಸಂತೋಷದಿಂದ ಕೂಡಿರಲಿ ಹಾಗೂ ನಮ್ಮ ಸುತ್ತ ಮುತ್ತ ಇರುವವರಿಗೂ ಸಂತೋಷ ನೀಡೋಣ. ಉದ್ವೇಗ ರಹಿತನಾಗಿ, ಆರೋಗ್ಯವಂತರಾಗಿ ಬಾಳೋಣ. ಈ ಜಗತ್ತು ಇನ್ನೂ ಉತ್ತಮ ತಾಣವಾಗಲಿ. ನಮ್ಮ ಹಿರಿಯರು ಮತ್ತು ಮಕ್ಕಳು ನಮ್ಮ ಶ್ರೇಷ್ಠತೆಗೆ ಹೆಮ್ಮೆ ಪಡುವಂತಾಗಲಿ. ನಮ್ಮ ಅಸಾಧಾರಣ ವ್ಯಕ್ತಿತ್ವವನ್ನು ಅವರು ಪ್ರೀತಿಯಿಂದ ಅನುಸರಿಸುವಂತಾಗಲಿ. ಓಂಕಾರ ಸ್ವರೂಪಿಣಿ ಮಹಾ ಸರಸ್ವತಿ ನಮಗೆಲ್ಲರಿಗೂ ಸನ್ಮಂಗಲವನ್ನು ಉಂಟು ಮಾಡಲಿ. ನಾವೇಲ್ಲರೂ ಜೋತೆಗೂಡಿ ಇಂದಿನಿಂದ ಮುಂದುವರಿಯೋಣ. ನಮ್ಮವರೇಲ್ಲರನ್ನು ಆದರ್ಶ ಜೀವನಕ್ಕೆ ಪ್ರೇರೇಪಿಸೋಣ. ಭಗವದ್ಗೀತೆ ಒಂದು ಪುಸ್ತಕವಲ್ಲ, ಅದೊಂದು ಶಕ್ತಿವೆಂಬುದನ್ನು ಮರೆಯದೀರೋಣ. ನಮ್ಮ ಕಲಿಕೆ ಈ ಕ್ಷಣದಿಂದಲೇ ಪ್ರಾರಂಭವಾಗಲಿದೆ. ನಾಳೆಯಿಂದ ಮುಂಜಾನೆ ಎದ್ದ ತಕ್ಷಣ ಓದುವ ಅಭ್ಯಾಸ ಮಾಡಿಕೋಳ್ಳೋಣ . ಸಜ್ಜನರೇ , ಯಾವುದೋ ಪುಣ್ಯದ ಕಾರಣದಿಂದ ನಮಗೋಂದು ಸೌಭಾಗ್ಯ ದೊರಕಿದೆ ಸದುಪಯೋಗ ಪಡಿಸಿಕಳ್ಳೋಣ. ಸರ್ವರಿಗೂ ಶುಭವಾಗಲಿ.
ಮಾನ್ಯರೇ
ಭಗವದ್ಗೀತೆಯನ್ನು ಪ್ರೀತಿಯಿಂದ ಓದಿ, ಮನನ ಮಾಡಿ ಆಗ ದುಃಖದಿಂದ ಪಾರಾಗುವಿರಿ. ನಮ್ಮೇಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯೇ ಪರಿಹಾರ. ಇದು ಒಂದು ಜನಾಂಗದಲ್ಲ. ಇಡೀ ಮಾನವ ಕುಲಕ್ಕೆ ಸೇರಿದ್ದು. ಅನೇಕ ಮಹಾತ್ಮರು ಗೀತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖ, ಶಾಂತಿ, ಸಮಾಧಾನವನ್ನು ಪಡೆದಿದ್ದಾರೆ.
ಸಹ್ರದಯರೇ ಮಾನವನದು ದೇಹವಲ್ಲ ಅದು ಆತ್ಮ. ನಾವು ಅನುಭವಿಸುವ ಎಲ್ಲಾ ದುಃಖ ದೇಹಕ್ಕೆ ಸಂಭಂದಿಸಿದು, ಆತ್ಮದಲ್ಲೇ ಮನಸನ್ನು ಸ್ಥಿರಗೊಳಿದರೆ ಎಲ್ಲಾ ದುಃಖದಿಂದ ಪಾರಾಗಬಹುದು.ಗೀತೆಯನ್ನು ಸರಿಯಾಗಿ ಮನನ ಮಾಡಿಕೊಂಡಲ್ಲಿ, ಯಶಸ್ಸು, ಕೀರ್ತಿ ಮತ್ತು ಸಂಪತ್ತನ್ನು ಪಡೆಯಬಹುದು. ಇಳಿ ವಯಸ್ಸಿನಲ್ಲಿ ವೈರಾಗ್ಯವನ್ನು ತಾಳಬಹುದು
ನೀವು ಏಕಾಂಗಿಯೆಂದು ತಿಳಿಯಬೇಡಿರಿ. ನಿಮ್ಮ ಶ್ರೇಯಸ್ಸನ್ನು ಬಯಸುವ ಸಜ್ಜನರು ಬಹಳಷ್ಟಿದ್ದಾರೆ. ನಮ್ಮ ವೇದಿಕೆಯ ಈ ಪ್ರಯತ್ನವೇ ಅದರ ಪ್ರತೀಕ. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಬೇಕಿದೆ. ಮಾಧ್ಯಮಗಳಲ್ಲಿ ಬರುವ ಕೆಟ್ಟ ವಿಚಾರಗಳ, ಅತ್ಯಾಚಾರಗಳ ಬಗ್ಗೆ ಓದುವುದನ್ನು ಬಿಟ್ಟು ದಿನದ ಪ್ರಾರಂಭ ಭಗವದ್ಗೀತೆಯ ಅಧ್ಯಯನದಲ್ಲಿ ಆರಂಭವಾಗಲಿ. ಇದು ನಮ್ಮ ಮೆದುಳಿಗೆ ಸ್ಪೂರ್ತಿಯ ಆಹಾರ. ನಾವೇಲ್ಲರು ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಉಪಯೋಗಿಸುವ ಪ್ರಯತ್ನ ಮಾಡೋಣ.
ನಮ್ಮೇಲ್ಲರ ಬಾಳು ಸಂತೋಷದಿಂದ ಕೂಡಿರಲಿ ಹಾಗೂ ನಮ್ಮ ಸುತ್ತ ಮುತ್ತ ಇರುವವರಿಗೂ ಸಂತೋಷ ನೀಡೋಣ. ಉದ್ವೇಗ ರಹಿತನಾಗಿ, ಆರೋಗ್ಯವಂತರಾಗಿ ಬಾಳೋಣ. ಈ ಜಗತ್ತು ಇನ್ನೂ ಉತ್ತಮ ತಾಣವಾಗಲಿ. ನಮ್ಮ ಹಿರಿಯರು ಮತ್ತು ಮಕ್ಕಳು ನಮ್ಮ ಶ್ರೇಷ್ಠತೆಗೆ ಹೆಮ್ಮೆ ಪಡುವಂತಾಗಲಿ. ನಮ್ಮ ಅಸಾಧಾರಣ ವ್ಯಕ್ತಿತ್ವವನ್ನು ಅವರು ಪ್ರೀತಿಯಿಂದ ಅನುಸರಿಸುವಂತಾಗಲಿ.
ಓಂಕಾರ ಸ್ವರೂಪಿಣಿ ಮಹಾ ಸರಸ್ವತಿ ನಮಗೆಲ್ಲರಿಗೂ ಸನ್ಮಂಗಲವನ್ನು ಉಂಟು ಮಾಡಲಿ. ನಾವೇಲ್ಲರೂ ಜೋತೆಗೂಡಿ ಇಂದಿನಿಂದ ಮುಂದುವರಿಯೋಣ. ನಮ್ಮವರೇಲ್ಲರನ್ನು ಆದರ್ಶ ಜೀವನಕ್ಕೆ ಪ್ರೇರೇಪಿಸೋಣ. ಭಗವದ್ಗೀತೆ ಒಂದು ಪುಸ್ತಕವಲ್ಲ, ಅದೊಂದು ಶಕ್ತಿವೆಂಬುದನ್ನು ಮರೆಯದೀರೋಣ.
ನಮ್ಮ ಕಲಿಕೆ ಈ ಕ್ಷಣದಿಂದಲೇ ಪ್ರಾರಂಭವಾಗಲಿದೆ. ನಾಳೆಯಿಂದ ಮುಂಜಾನೆ ಎದ್ದ ತಕ್ಷಣ ಓದುವ ಅಭ್ಯಾಸ ಮಾಡಿಕೋಳ್ಳೋಣ .
ಸಜ್ಜನರೇ , ಯಾವುದೋ ಪುಣ್ಯದ ಕಾರಣದಿಂದ ನಮಗೋಂದು ಸೌಭಾಗ್ಯ ದೊರಕಿದೆ ಸದುಪಯೋಗ ಪಡಿಸಿಕಳ್ಳೋಣ.
ಸರ್ವರಿಗೂ ಶುಭವಾಗಲಿ.ಈ ಪ್ರಶ್ನೆಯನ್ನು ನಮಗೆ ನಮ್ಮ ಮಕ್ಕಳು ಕೇಳಿರಬಹುದು ಅಥವಾ ನಾವು ನಮ್ಮ ಅಜ್ಜಂದಿರಿಗೆ ಕೇಳಿರಬಹುದು! ಉತ್ತರ ಸಿಕ್ಕಿರಲೂಬಹುದು. ಆದರೆ ಒಬ್ಬ ಅಜ್ಜ ಕೊಟ್ಟ ಉತ್ತರ ಕುತೂಹಲಕಾರಿಯಾಗಿದೆ. ಆ ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ.
ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ. ಕೆಲವು ದಿನಗಳ ನಂತರ ಮೊಮ್ಮಗ ‘ಅಜ್ಜ ಭಗವದ್ಗೀತೆ ಪುಸ್ತಕವನ್ನು ನಾನು ಓದಲು ಪ್ರಯತ್ನಿಸಿದೆ. ಆದರೆ ನನಗೆ ಏನೂ ಅರ್ಥವಾಗಲಿಲ್ಲ. ಅರ್ಥವಾದ ಅಲ್ಪಸ್ವಲ್ಪ ಕೂಡ ನೆನಪಿನಲ್ಲಿ ಉಳಿಯುವುದಿಲ್ಲ’ ಎಂದ. ಅಜ್ಜ ‘ ಅರ್ಥವಾದರೂ, ಅರ್ಥವಾಗದಿದ್ದರೂ, ನೆನಪಿನಲ್ಲುಳಿದರೂ, ನೆನಪಿನಲ್ಲುಳಿಯದಿದ್ದರೂ ಓದಲೇಬೇಕಾದ ಗ್ರಂಥಗಳು ಇವು’ ಎಂದರು. ಮೊಮ್ಮಗ ‘ ಅರ್ಥವಾಗದ ನೆನಪಿನಲ್ಲಿ ಉಳಿಯದ ಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ? ಎಂದ. ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ ‘ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ.
ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ, ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿಕೊಂಡು ಬಾ’ ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ. ಇದ್ದಿಲು ಹಾಕಿಟ್ಟಿದ್ದರಿಂದ ಜೋಳಿಗೆ ಕಪ್ಪು ಕಪ್ಪಾಗಿತ್ತು. ಆತ ಅದನ್ನು ತೆಗೆದುಕೊಂಡು ನದಿಗೆ ಹೋದ. ಜೋಳಿಗೆಯನ್ನು ನೀರಿನಲ್ಲಿ ಅದ್ದಿ ನೀರು ತುಂಬಿಸಿಕೊಂಡ. ಮನೆ ಕಡೆ ಧಾವಿಸಿದ. ಜೋಳಿಗೆ ಬಟ್ಟೆಯದಾದ್ದರಿಂದ ಮನೆಗೆ ಬರುವಷ್ಟರಲ್ಲಿ ನೀರೆಲ್ಲಾ ಸೋರಿ ಹೋಗಿತ್ತು. ಮೊಮ್ಮಗ ಅಜ್ಜನಿಗೆ ‘ಜೋಳಿಗೆಯಲ್ಲಿ ನೀರು ತರುವುದು ಕಷ್ಟ. ಇಲ್ಲಿಗೆ ಬರುವಷ್ಟರಲ್ಲಿ ಎಲ್ಲ ಸೋರಿಹೋಗುತ್ತದೆ. ಬಿಂದಿಗೆಯಲ್ಲಿ ನೀರು ತರಲೆ? ಎಂದು ಕೇಳಿ.
ಅಜ್ಜ ‘ ನನಗೆ ಬಿಂದಿಗೆಯ ನೀರು ಬೇಡ. ಜೋಳಿಗೆಯ ನೀರೇ ಬೇಕು’ ಎಂದರು. ಮೊಮ್ಮಗ ಮತ್ತೊಮ್ಮೆ ನದಿಗೆ ಧಾವಿಸಿ, ಜೋಳಿಗೆಯಲ್ಲಿ ನೀರು ತುಂಬಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಮತ್ತೆ ನೀರೆಲ್ಲ ಸೋರಿಹೋಗಿತ್ತು. ಅಜ್ಜ ‘ ಮತ್ತೆ ಹೋಗು. ಜೋಳಿಗೆಯಲ್ಲೇ ನೀರು ತೆಗೆದುಕೊಂಡು ಬಾ’ ಎಂದರು. ಮೊಮ್ಮಗ ಮತ್ತೆ ನದಿಗೆ ಓಡಿದ. ಅಪರೂಪದ ಮೊಮ್ಮಗ, ಅಜ್ಜನ ಮಾತನ್ನು ಚಾಚೂ ತಪ್ಪದೇ, ಪ್ರತಿಭಟಿಸದೇ ಪಾಲಿಸುತ್ತಿದ್ದ. ಹೀಗೆ ಹತ್ತು ಸಾರಿ ನಡೆಯಿತು. ಆದರೆ ಜೋಳಿಗೆಯಲ್ಲಿ ನೀರು ತರಲಾಗ ಲಿಲ್ಲ. ಮೊಮ್ಮಗ ‘ ಅಜ್ಜಾ! ನಾನು ಹತ್ತಲ್ಲ, ನೂರು ಸಾರಿ ಪ್ರಯತ್ನಿಸಿದರೂ ಜೋಳಿಗೆಯಲ್ಲಿ ನೀರು ತರಲಾಗುವುದಿಲ್ಲ. ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸೋರಿ ಹೋಗುತ್ತದೆ.’ ಎಂದ.
‘ಮಗೂ, ನೀರು ಸೋರಿ ಹೋಗುತ್ತದೆಂಬುದು ನಿಜ. ಚಿಂತೆಯಿಲ್ಲ. ಆದರೆ ಜೋಳಿಗೆ ಈಗ ಹೇಗಾಗಿದೆ ನೋಡು!’ ಎಂದರು. ಮೊದಲನೆಯ ಸಾರಿ ನದಿಗೆ ಹೋದಾಗ ಜೋಳಿಗೆ ಇದ್ದಿಲಿನ ಕಪ್ಪು ಬಣ್ಣದಲ್ಲಿತ್ತು. ಈಗ ಹತ್ತು ಸಾರಿ ನದಿಗೆ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ಕಪ್ಪು ಜೋಳಿಗೆ ಬಿಳಿಯ ಜೋಳಿಗೆಯಾಗಿತ್ತು! ಅಂದರೆ ಕೊಳೆಯನ್ನೆಲ್ಲ ಕಳೆದುಕೊಂಡು ಶುಭ್ರವಾಗಿತ್ತು! ಆಗ ಅಜ್ಜಾ ‘ ಭಗವದ್ಗೀತೆಯನ್ನು ಓದಿದಾಗ ಅರ್ಥವಾಗದಿರಬಹುದು, ಓದಿದ್ದು ನೆನಪಿನಲ್ಲಿ ಉಳಿಯದಿರಬಹುದು, ಆದರೆ ಓದುವಾತನ ಬುದ್ಧಿ ಶುದ್ಧಿಯಾಗುತ್ತದೆ. ಅದಕ್ಕಾಗಿ ಭಗವದ್ಗೀತೆಯನ್ನು ಓದಬೇಕು’ ಎಂದರಂತೆ. ಧರ್ಮಗ್ರಂಥಗಳನ್ನು ಏಕೆ ಓದಬೇಕೆಂಬ ಪ್ರಶ್ನೆಯನ್ನು ನಮ್ಮ ಮಕ್ಕಳು ನಮಗೆ ಕೇಳಿದರೆ, ನಾವು ಉತ್ತರ ಕೊಡಲು ಈ ಪ್ರಸಂಗ ಸಹಕಾರಿಯಾಗಬಹುದು.ಮಾನ್ಯರೇ ಭಗವದ್ಗೀತೆಯನ್ನು ಪ್ರೀತಿಯಿಂದ ಓದಿ, ಮನನ ಮಾಡಿ ಆಗ ದುಃಖದಿಂದ ಪಾರಾಗುವಿರಿ. ನಮ್ಮೇಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯೇ ಪರಿಹಾರ. ಇದು ಒಂದು ಜನಾಂಗದಲ್ಲ. ಇಡೀ ಮಾನವ ಕುಲಕ್ಕೆ ಸೇರಿದ್ದು. ಅನೇಕ ಮಹಾತ್ಮರು ಗೀತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖ, ಶಾಂತಿ, ಸಮಾಧಾನವನ್ನು ಪಡೆದಿದ್ದಾರೆ. ಸಹ್ರದಯರೇ ಮಾನವನದು ದೇಹವಲ್ಲ ಅದು ಆತ್ಮ. ನಾವು ಅನುಭವಿಸುವ ಎಲ್ಲಾ ದುಃಖ ದೇಹಕ್ಕೆ ಸಂಭಂದಿಸಿದು, ಆತ್ಮದಲ್ಲೇ ಮನಸನ್ನು ಸ್ಥಿರಗೊಳಿದರೆ ಎಲ್ಲಾ ದುಃಖದಿಂದ ಪಾರಾಗಬಹುದು.ಗೀತೆಯನ್ನು ಸರಿಯಾಗಿ ಮನನ ಮಾಡಿಕೊಂಡಲ್ಲಿ, ಯಶಸ್ಸು, ಕೀರ್ತಿ ಮತ್ತು ಸಂಪತ್ತನ್ನು ಪಡೆಯಬಹುದು. ಇಳಿ ವಯಸ್ಸಿನಲ್ಲಿ ವೈರಾಗ್ಯವನ್ನು ತಾಳಬಹುದು ನೀವು ಏಕಾಂಗಿಯೆಂದು ತಿಳಿಯಬೇಡಿರಿ. ನಿಮ್ಮ ಶ್ರೇಯಸ್ಸನ್ನು ಬಯಸುವ ಸಜ್ಜನರು ಬಹಳಷ್ಟಿದ್ದಾರೆ. ನಮ್ಮ ವೇದಿಕೆಯ ಈ ಪ್ರಯತ್ನವೇ ಅದರ ಪ್ರತೀಕ. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಬೇಕಿದೆ. ಮಾಧ್ಯಮಗಳಲ್ಲಿ ಬರುವ ಕೆಟ್ಟ ವಿಚಾರಗಳ, ಅತ್ಯಾಚಾರಗಳ ಬಗ್ಗೆ ಓದುವುದನ್ನು ಬಿಟ್ಟು ದಿನದ ಪ್ರಾರಂಭ ಭಗವದ್ಗೀತೆಯ ಅಧ್ಯಯನದಲ್ಲಿ ಆರಂಭವಾಗಲಿ. ಇದು ನಮ್ಮ ಮೆದುಳಿಗೆ ಸ್ಪೂರ್ತಿಯ ಆಹಾರ. ನಾವೇಲ್ಲರು ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಉಪಯೋಗಿಸುವ ಪ್ರಯತ್ನ ಮಾಡೋಣ. ನಮ್ಮೇಲ್ಲರ ಬಾಳು ಸಂತೋಷದಿಂದ ಕೂಡಿರಲಿ ಹಾಗೂ ನಮ್ಮ ಸುತ್ತ ಮುತ್ತ ಇರುವವರಿಗೂ ಸಂತೋಷ ನೀಡೋಣ. ಉದ್ವೇಗ ರಹಿತನಾಗಿ, ಆರೋಗ್ಯವಂತರಾಗಿ ಬಾಳೋಣ. ಈ ಜಗತ್ತು ಇನ್ನೂ ಉತ್ತಮ ತಾಣವಾಗಲಿ. ನಮ್ಮ ಹಿರಿಯರು ಮತ್ತು ಮಕ್ಕಳು ನಮ್ಮ ಶ್ರೇಷ್ಠತೆಗೆ ಹೆಮ್ಮೆ ಪಡುವಂತಾಗಲಿ. ನಮ್ಮ ಅಸಾಧಾರಣ ವ್ಯಕ್ತಿತ್ವವನ್ನು ಅವರು ಪ್ರೀತಿಯಿಂದ ಅನುಸರಿಸುವಂತಾಗಲಿ. ಓಂಕಾರ ಸ್ವರೂಪಿಣಿ ಮಹಾ ಸರಸ್ವತಿ ನಮಗೆಲ್ಲರಿಗೂ ಸನ್ಮಂಗಲವನ್ನು ಉಂಟು ಮಾಡಲಿ. ನಾವೇಲ್ಲರೂ ಜೋತೆಗೂಡಿ ಇಂದಿನಿಂದ ಮುಂದುವರಿಯೋಣ. ನಮ್ಮವರೇಲ್ಲರನ್ನು ಆದರ್ಶ ಜೀವನಕ್ಕೆ ಪ್ರೇರೇಪಿಸೋಣ. ಭಗವದ್ಗೀತೆ ಒಂದು ಪುಸ್ತಕವಲ್ಲ, ಅದೊಂದು ಶಕ್ತಿವೆಂಬುದನ್ನು ಮರೆಯದೀರೋಣ. ನಮ್ಮ ಕಲಿಕೆ ಈ ಕ್ಷಣದಿಂದಲೇ ಪ್ರಾರಂಭವಾಗಲಿದೆ. ನಾಳೆಯಿಂದ ಮುಂಜಾನೆ ಎದ್ದ ತಕ್ಷಣ ಓದುವ ಅಭ್ಯಾಸ ಮಾಡಿಕೋಳ್ಳೋಣ . ಸಜ್ಜನರೇ , ಯಾವುದೋ ಪುಣ್ಯದ ಕಾರಣದಿಂದ ನಮಗೋಂದು ಸೌಭಾಗ್ಯ ದೊರಕಿದೆ ಸದುಪಯೋಗ ಪಡಿಸಿಕಳ್ಳೋಣ. ಸರ್ವರಿಗೂ ಶುಭವಾಗಲಿ.
No comments:
Post a Comment